ರಾಧಿಕಾ ಪಂಡಿತ್ ಮತ್ತು ಯಶ್ ಜೋಡಿ ಸ್ಯಾಂಡಲ್ ವುಡ್ ನ ಪ್ರಖ್ಯಾತ ಜೋಡಿಗಳಲ್ಲಿ ಒಂದು. ಇವರು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಮದುವೆಯ ನಂತರ ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರವಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇನ್ಸ್ಟಾ ಗ್ರಾಮ್ ನಲ್ಲಿ ಇವರು ಹಂಚಿಕೊಳ್ಳುವ ಫೋಟೋಗಳಿಗೆ ಅಭಿಮಾನಿಗಳಿಂದ ಭರಪೂರ್ ಮೆಚ್ಚುಗೆ ದೊರೆಯುತ್ತದೆ. ಅದರಲ್ಲೂ ಮಕ್ಕಳಾದ ಆಯ್ರಾ, ಯಥರ್ವ್ ಅವರ ಕುರಿತಾದ ಪೋಸ್ಟಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ.

ಆಯ್ರಾ ಹಾಗೂ ಯಥರ್ವ್ ಸಹ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಸೆಲೆಬ್ರೆಟಿ ಕಿಡ್ಸ್ ಆಗಿರುವುದರಿಂದ ಇವರ ಫೋಟೋಗಳು ಸಹ ತುಂಬಾ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತವೆ. ಸದ್ಯ ಇವರು ವೆಕೇಷನ್ ಮೂಡ್ ನಲ್ಲಿದ್ದು, ಸಮುದ್ರ ತೀರದಲ್ಲಿ ಆಟವಾಡುತ್ತಿರುವ ಫೋಟೋಗಳನ್ನು ರಾಧಿಕಾ ಅವರು ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಸದ್ಯ ತಮ್ಮ ಪುಟಾಣಿ ಮಕ್ಕಳ ಆರೈಕೆಯಲ್ಲಿಯೇ ಸಮಯ ಕಳೆಯುತ್ತಿದ್ದು, ಹಲವಾರು ಅಭಿಮಾನಿಗಳಿಂದ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಬೇಡಿಕೆ ಕೇಳಿಬರುತ್ತಿದೆ. ಹಲವಾರು ಸ್ಟಾರ್ ನಟರ ಜೊತೆಯಲ್ಲಿ ಸ್ಕ್ರಿನ್ ಹಂಚಿಕೊಂಡಿರುವ ರಾಧಿಕಾ ಅವರು ಮತ್ತೊಮ್ಮೆ ಸಿನಿಮಾಗಳಲ್ಲಿ ಕಾಣಿಸಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮಕ್ಕಳಿಬ್ಬರೂ ಸಮುದ್ರ ತೀರದಲ್ಲಿ ರಜೆಯ ಮಜವನ್ನು ಮಾಡುತ್ತಿದ್ದಾರೆ. ಮರಳಿನಲ್ಲಿ ಆಟವನ್ನು ಆಡುತ್ತಾ ಸಂತೋಷವಾಗಿದ್ದಾರೆ. ಸಮುದ್ರ ತಟದಲ್ಲಿ ಸುತ್ತಾಡುತ್ತಿರುವ ಈ ಫೋಟೋಗಳು ಸಖತ್ತಾಗೆ ಸದ್ದು ಮಾಡುತ್ತಿವೆ.
ಇದನ್ನೂ ನೋಡಿ: ಕಾಂತಾರ’ ಚಿತ್ರದ ನಟಿ ಸಪ್ತಮಿ ಗೌಡ ಅವರ ಸುಂದರ ಫೋಟೋಗಳು
ಯಥರ್ವ್ ಯಶ್ ಜೋಕಾಲಿ ಮಜಾ ಪಡೆಯುತ್ತಿರುವುದು
ಬೀಚ್ ನಲ್ಲಿ ಸಮಯ ಕಳೆಯುತ್ತಿರುವ ಯಥರ್ವ್, ಜೋಕಾಲಿಯ ಮಜವನ್ನು ಪಡೆದಿದ್ದಾನೆ. ಈ ಫೋಟೋವನ್ನು ಅಭಿಮಾನಿಗಳು ಬಹಳಾನೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಬಣ್ಣದ ಲೋಕದ ಸ್ಟಾರ್ ಜೋಡಿ ಏನೇ ಮಾಡಿದರೂ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುವುದು ಸಾಮಾನ್ಯ. ಅಂತೆಯೇ ಅವರ ಮಕ್ಕಳು ಸಹ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸದಾ ಸುದ್ದಿಯಾಗುವ ಇವರು, ಸದ್ಯ ಬೀಚ್ ನಲ್ಲಿ ಆಟವಾಡುತ್ತ ಸಮಯ ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿವೆ.
ಯಶ್ ಹಾಗೂ ರಾಧಿಕಾ ಪಂಡಿತ್ ಪ್ಯಾಮಿಲಿ ವೆಕೇಷನ್ ಮಜಾ ಅನುಭವಿಸುತ್ತಿರುವ ಸುದ್ದಿ ಇದಾಗಿದ್ದು, ಆದರೆ ಮಕ್ಕಳೊಂದಿಗೆ ಇರುವ ಫೋಟೋಗಳನ್ನು ಮಾತ್ರ ರಾಧಿಕಾ ಅವರು ಹಂಚಿಕೊಂಡಿದ್ದಾರೆ. ಇವರ ಜೊತೆಯಲ್ಲಿ ಯಶ್ ಸಹ ವೆಕೇಷನ್ ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ಮಕ್ಕಳು ಖುಷಿ ಪಡುತ್ತಿರುವ ಫೋಟೋಗಳು ಕಂಡುಬರುತ್ತಿದ್ದು, ಬೀಚ್ ನಲ್ಲಿ ಆಟವಾಡಿ, ಜೋಕಾಲಿಯಲ್ಲಿ ಕುಳಿತು ಸುಂದರ ಸಮಯವನ್ನಂತು ಕಳೆದಿರುವ ವಿಚಾರ ತಿಳಿಯುತ್ತಿವೆ.
ದೊಡ್ಡ ಪ್ರಮಾಣದಲ್ಲಿ ಈ ಫೋಟೋಗಳಿಗೆ ಲೈಕ್ ಮತ್ತು ಕಾಮೆಂಟ್ ಗಳು ಬಂದಿದ್ದು, ಅಭಿಮಾನಿಗಳು ರಾಧಿಕಾ ಅವರು ಬೇಗನೆ ಸಿನಿಮಾ ರಂಗಕ್ಕೆ ಹಿಂತಿರುಗಲಿ ಎಂದು ಸಹ ಹೇಳಿದ್ದಾರೆ. ಅಭಿಮಾನಿಗಳ ಈ ಬೇಡಿಕೆಯನ್ನು ರಾಧಿಕಾ ಪಂಡಿತ್ ಅದ್ಯಾವಾಗ ಈಡೇರಿಸುತ್ತಾರೆ ಕಾದುನೋಡಬೇಕಿದೆ.
ಇದನ್ನೂ ನೋಡಿ: ಆಯ್ರಾ, ಯಥರ್ವ್ಗೂ ವೆಕೇಶನ್: ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್