ಸದಾ ಸಾಮಾಜಿಕ ತಾಣಗಳಲ್ಲಿ ಸಕ್ರೀಯರಾಗಿರುವ ಲಕ್ಷ್ಮಿ ರೈ ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ತಮ್ಮ ಫೋಟೋಗಳಿಂದಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ತೆಲಗು, ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಇವರು ಶೇರ್ ಮಾಡಿರುವ ಫೋಟೋಗಳನ್ನು ನೋಡಿ ಪಡ್ಡೆಹುಡುಗರ ಎದೆಬಡಿತವನ್ನು ಹೆಚ್ಚುರುವುದಂತೂ ಸುಳ್ಳಲ್ಲ.
ಲಕ್ಷ್ಮಿ ರೈ ಅವರು ಶೇರ್ ಮಾಡಿರುವ ಹಾಟ್ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ಸ್ಗಳನ್ನು ಪಡೆದುಕೊಂಡಿದ್ದಾರೆ. ಇವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿಯೂ ಮಿಂಚಿದ್ದಾರೆ. ಆದರೆ ಇವರ ಚಿತ್ರಗಳು ಹೇಳಿಕೊಳ್ಳುವ ರೀತಿಯಲ್ಲಿ ಯಶಸ್ಸನ್ನು ಕಾಣದಿರುವುದು ಬೇಸರದ ಸಂಗತಿ.
ಲಕ್ಷ್ಮಿ ರೈ ಅವರು 2005 ರಲ್ಲಿ ತಮಿಳು ಚಿತ್ರದಿಂದ ತಮ್ಮ ಸಿನಿ ಪಯಣವನ್ನು ಆರಂಭಿಸಿದರು. ಇಲ್ಲಿಯವರೆಗೆ ಇವರು ಸುಮಾರು ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ವಾಲ್ಮೀಕಿ, ಸ್ನೇಹಾನಾ ಪ್ರೀತಿನಾ, ಅಟ್ಟಹಾಸ ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಯಶಸ್ಸು ಇವರ ಕೈ ಹಿಡಿಯಲಿಲ್ಲ. ಈ ಕಾರಣದಿಂದಾಗಿ ಇವರು ಹಾಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಹಲವಾರು ಚಿತ್ರಗಳಲ್ಲಿ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇವರು ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಈ ಕಾರಣಗಳಿಂದಾಗಿಯೇ ಇವರ ಜಾಲತಾಣದ ಫೋಟೋಗಳಿಗೆ ಲಕ್ಷಗಳ ಲೆಕ್ಕದಲ್ಲಿ ಲೈಕ್ ಗಳು ದೊರೆತಿವೆ.
ಇದನ್ನೂ ಓದಿರಿ: ಹಾಟ್ ಹಾಟ್ ಲುಕ್ ನಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ !