ನಿಮ್ಮ ಪ್ರೀತಿ ಪಾತ್ರರಿಗೆ ದೀಪಾವಳಿ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

happy-deepavali-wishes-quotes-images-greetings-and-whatsapp-status-messages-in-kannada

ದೀಪಾವಳಿ ಎಂದರೆ ಬೆಳಕಿನ ಹಬ್ಬ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರ ಮನೆ-ಮನದಲ್ಲಿ ಸಂಭ್ರಮ, ಸಡಗರ ತುಂಬಿ ತುಳುಕುತ್ತದೆ. ಎಲ್ಲರೂ ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗುತ್ತಾ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಾರೆ. ದೀಪಾವಳಿಯಲ್ಲಿ ಪ್ರಮುಖವಾಗಿ ಲಕ್ಷ್ಮಿ ಮತ್ತು ಗಣೇಶನ ಪೂಜೆಯನ್ನು ಶ್ರದ್ದೆಯಿಂದ ಮಾಡುತ್ತಾರೆ. ಇದರಿಂದ ಪ್ರಯೊಬ್ಬರ ಮನೆಯಲ್ಲೂ ಶಾಂತಿ, ನೆಮ್ಮದಿ, ಸಮೃದ್ಧಿ ಉಂಟಾಗುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಶೃದ್ಧೆಯಿಂದ ದೈವಿಕ ಆಚರಣೆಗಳನ್ನು ಆಚರಿಸಲಾಗುತ್ತದೆ. ಸಂಭ್ರಮ ಸಡಗರವನ್ನು ಗೆಳೆಯರು, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಆಚರಿಸುತ್ತೇವೆ. ಅದಲ್ಲದೆ ಪ್ರೀತಿ ಪಾತ್ರರೊಂದಿಗೆ ಶುಭಾಷಯ ವಿನಿಮಯ ಮಾಡಿಕೊಳ್ಳುವುದು ಸಹ ರೂಡಿಯಲ್ಲಿದೆ. ಈ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿ ಕೆಲವು ಸಂದೇಶಗಳನ್ನು ನೀಡಲಾಗಿದೆ.

ಇದನ್ನೂ ಓದಿರಿ : ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಕೆಲವು ಸಂದೇಶಗಳು

 • ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ, ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ, ಬೆಳಕಿನ ಹಬ್ಬದ ಶುಭಾಶಯಗಳು !

 • ಕತ್ತಲನ್ನು ಕಳೆದು ಬೆಳಕಿನ ಕಡೆಗೆ ಸಾಗುವ ಹಬ್ಬವೇ ದೀಪಾವಳಿ ! ನಿಮ್ಮ ಬಾಳು ಈ ದೀಪದಂತೆ ಬೆಳಗಲಿ…
  ದೀಪಾವಳಿ ಹಬ್ಬದ ಶುಭಾಶಯಗಳು.
 • ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ಸಾಹ, ಹರ್ಷ, ಉಲ್ಲಾಸ ಮತ್ತು ಸಂತಸ ತರಲೆಂದು ಹಾರೈಸುತ್ತೇನೆ.

happy-deepavali-wishes-quotes-images-greetings-and-whatsapp-status-messages-in-kannada

 • ಬೆಳಕೇ ನಿನ್ನೊಲುಮೆಯಿಂದ ಹೃದಯದೊಳು ಒಲುಮೆಯ ಗೀತೆ, ತೇಲಿ ಬರುತ್ತಿರಲಿ ಎದೆಯಿಂದ ಎದೆಗೆ.. ನಿನ್ನ ಪ್ರೀತಿಯ ಗಾಳಿ ಸೋಕಿ ದ್ವೇಷ ಸ್ವಾರ್ಥವ ಹೊರಗೆ ನೂಕಿ.. ನಿಮಗೂ ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಇದನ್ನೂ ಓದಿರಿ : Deepavali 2021: ದೀಪಗಳ ಹಬ್ಬದ ಆಚರಣೆ ಮತ್ತು ಅದರ ಮಹತ್ವ ಇಲ್ಲಿದೆ

 • ದೀಪಾವಳಿ ನಿಮ್ಮ ಜೀವನವನ್ನು ಬೆಳಗಲಿ, ನಿಮ್ಮ ಬದುಕು ಪ್ರಕಾಶಮಾನವಾಗಿರಲಿ, ಮನೆ ಮನದಲ್ಲಿ ನೆಮ್ಮದಿ ತರಲಿ. ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
 • ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ, ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

happy-deepavali-wishes-quotes-images-greetings-and-whatsapp-status-messages-in-kannada

 • ಮೂಡಲಿ ಸಂಭ್ರಮ-ಸಡಗರ.. ನಶಿಸಲಿ ಬದುಕಿನಲ್ಲಿ ಅಂಧಕಾರ.. ತುಂಬಲಿ ಮನೆಗಳಲ್ಲಿ ಸಂಭ್ರಮ-ಸಡಗರ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿಯ ಶುಭಾಶಯಗಳು.
 • ಜಗದ ಸುತ್ತಲೂ ಬರಿಯ ಕತ್ತಲು, ಸರಿಯಲಿ ಮನದ ದುಗುಡ ದುಮ್ಮಾನ. ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸಮ್ಮಾನ. ದೀಪಾವಳಿಯ ಶುಭಾಶಯಗಳು.

 • ಜ್ಯೋತಿಯಿಂದ ಜ್ಯೋತಿ ಬೆಳಗಲಿ, ದೀಪದಿಂದ ಮನ ಬೆಳಗಲಿ, ದೀಪಾವಳಿ ನಮ್ಮ ನಿಮ್ಮೆಲ್ಲರ ಬಾಳು ಬೆಳಗಲಿ. ದೀಪಾವಳಿಯ ಹಾರ್ದಿಕ ಶುಭಾಶಯಗಳು.
 • ದೀಪದಂತೆ ನಿಮ್ಮ ಬದುಕು ಯಾವಾಗಲೂ ಹೊಳೆಯುತ್ತಿರಲೆಂದು ಹಾರೈಸುತ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

happy-deepavali-wishes-quotes-images-greetings-and-whatsapp-status-messages-in-kannada

 • ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

 • ಮೂಡಲಿ ಖುಷಿಯ ಚಿತ್ತಾರ..
  ದೂರವಾಗಲಿ ಬದುಕಿನ ಅಂಧಕಾರ..
  ತುಂಬಲಿ ಮನೆ ಮನಗಳಲ್ಲಿ ಸಡಗರ..ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
 • ದೀಪದ ಹಬ್ಬ ದೀಪಾವಳಿ ನಿಮ್ಮ ಜೀವನದ ದೀಪವಾಗಲಿ,
  ದೀಪದ ಹಬ್ಬದಲ್ಲಿ ಎಲ್ಲರ ಮನೆಯಲ್ಲೂ ಮತ್ತು ಮನದಲ್ಲೂ ದೀಪ ಬೆಳಗಲಿ..

happy-deepavali-wishes-quotes-images-greetings-and-whatsapp-status-messages-in-kannada

 • ಬದುಕಿಗೆ ದಾರಿದೀಪ ಅಭಿವೃದ್ಧಿಗೆ ಆಶಾದೀಪ ಸಾಧನೆಗೆ ಸ್ಫೂರ್ತಿ ದೀಪ, ನಗು ನಲಿವಿಗೆ ನಂದಾದೀಪವ ಈ ದೀಪಾವಳಿ, ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕು ತರಲಿ..

LEAVE A REPLY

Please enter your comment!
Please enter your name here