ತುಳಸಿ ವಿವಾಹ ಮಹತ್ವ, ಆಚರಣೆಯ ವಿಧಾನ ಮತ್ತು ಶುಭಾಶಯ ಸಂದೇಶಗಳು

ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಮಹತ್ವವಾದ ಸ್ಥಾನವಿದೆ. ವಿಶೇಷವಾಗಿ ತುಳಸಿ ಕಟ್ಟೆಯನ್ನು ಲಕ್ಷ್ಮೀದೇವಿಯ ಆವಾಸ ಸ್ಥಾನವೆಂದೇ ಭಾವಿಸುತ್ತಾರೆ. ಅಲ್ಲದೇ ತುಳಸಿ ಎಂದರೆ, ಗುಣಗಳಲ್ಲಿ ತುಲನೆಗೆ ನಿಲುಕದ್ದು ಎಂಬ ಅರ್ಥವಿದೆ. ತುಳಸಿ ವಿವಾಹ ಭಾರತೀಯ ಸಂಸ್ಕೃತಿಯಲ್ಲಿ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಒಂದು ಆಚರಣೆಯಾಗಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ತುಳಸಿ ಗಿಡದ ಔಷಧ ಮಹತ್ವ ಒಂದೆಡೆಯಾದರೆ, ಇನ್ನು ಪೌರಾಣಿಕವಾಗಿ ಭಗವಾನ್ ವಿಷ್ಟುವು ತನ್ನ ನಾಲ್ಕು ತಿಂಗಳ ಯೋಗನಿದ್ರೆಯಿಂದ ಇದೇ ದಿನ ಅಂದರೆ ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ ದಿನ ಎಚ್ಚರಗೊಂಡನೆಂದು ಹೇಳಲಾಗುತ್ತದೆ. ಈ ಮಹತ್ವವಾದ ದಿನದಂದು ಸಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ನಡೆಸಲಾಗುತ್ತದೆ.

ತುಳಸಿ ವಿವಾಹಕ್ಕಿರುವ ಪೌರಾಣಿಕ ಹಿನ್ನೆಲೆ

ಪುರಾಣಗಳ ಪ್ರಕಾರ, ವೃಂದಾ ಎಂಬ ದೇವಿಯು ಮಹಾವಿಷ್ಟುವಿನ ಮಹಾ ಭಕ್ತೆಯಾಗಿದ್ದಳು. ಅವಳನ್ನು ಜಲಂಧರನೆಂಬ ದುಷ್ಟ ರಾಕ್ಷಸ ಮದುವೆಯಾಗುತ್ತಾನೆ. ಅವಳ ತಪೋ ಶಕ್ತಿಯ ಫಲವಾಗಿ ಜಲಂಧರನು ಅಜೇಯನಾಗುತ್ತಾನೆ. ತಾನು ಅಜೇಯನೆಂದು ತಿಳಿದು ದೇವತೆಗಳ ಮೇಲೆ ಆಕ್ರಮಣವನ್ನು ಆರಂಭಿಸುತ್ತಾನೆ. ನಂತರ ಜಲಂಧರನು ಶಿವನನ್ನು ಯುದ್ಧದಲ್ಲಿ ಸೋಲಿಸಿ, ಅಹಂಕಾರದಿಂದ ದೇವತೆಗಳು ಮತ್ತು ಅಪ್ಸರೆಯರೆಲ್ಲರಿಗೆ ತೊಂದರೆಯನ್ನು ನೀಡಲು ಆರಂಭಿಸುತ್ತಾನೆ. ಜಲಂಧರನ ಈ ನಡತೆಗಳಿಂದಾಗಿ ದೇವತೆಗಳು ಮತ್ತು ಇಂದ್ರ ಮಹಾವಿಷ್ಟುವಿನಲ್ಲಿಗೆ ಬಂದು ಜಲಂಧರನ ಉಪಟಳವನ್ನು ತಡೆಯುವಂತೆ ಕೇಳಿಕೊಳ್ಳುತ್ತಾರೆ.

ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival

ಮಹಾವಿಷ್ಟುವು ದೇವತೆಗಳಿಗೆ ಸಮಾಧಾನವನ್ನು ಹೇಳಿ, ಜಲಂಧರನ ರೂಪವನ್ನು ತೊಟ್ಟು ವೃಂದಳಲ್ಲಿಗೆ ಬರುತ್ತಾನೆ. ವೃಂದಳನ್ನು ಮೋಹಿಸಿ ಆಕೆಯ ಪಾವಿತ್ರತೆಗೆ ದಕ್ಕೆ ತರುತ್ತಾನೆ. ಇದರಿಂದಾಗಿ ವೃಂದಾಳ ಸದ್ಗುಣಗಳು ಕಡಿಮೆಯಾಗಿ ಜಲಂಧರನು ಯುದ್ಧದಲ್ಲಿ ಶಿವನಿಂದ ಹತನಾಗುತ್ತಾನೆ. ಮಹಾವಿಷ್ಟುವು ಮೋಸದಿಂದ ತನ್ನ ಪಾವಿತ್ರತೆಗೆ ದಕ್ಕೆತಂದ ವಿಷಯ ತಿಳಿದು ಕೋಪಗೊಂಡು ಕಪ್ಪು ಕಲ್ಲಾಗಿ ಹೋಗು ಎಂದು ಶಾಪವನ್ನು ನೀಡುವುದಲ್ಲದೇ ಪ್ರಾಣತ್ಯಾಗವನ್ನೂ ಮಾಡುತ್ತಾಳೆ. ದೇವತೆಗಳೆಲ್ಲ ಸೇರಿ ಆಕೆಯ ಆತ್ಮವನ್ನು ಒಂದು ಗಿಡಲ್ಲಿ ಸ್ಥಾಪಿಸಿ ತುಳಸಿ ಎಂದು ನಾಮಕರಣ ಮಾಡುತ್ತಾರೆ. ತುಳಸಿಯನ್ನು ಮಹಾಲಕ್ಷೀಯ ಮಾತ್ತೊಂದು ರೂಪವೆಂದೂ ಹೇಳಲಾಗುತ್ತದೆ. ಈ ಕಾರಣದಿಂದಾಗಿಯೇ ಮಹಾವಿಷ್ಟುವು ತಾನು ಸಾಲಿಗ್ರಾಮದಲ್ಲಿ ನೆಲೆಸುವುದಾಗಿಯೂ, ಪ್ರಬೋಧಿನಿ ಏಕಾದಶಿಯಂದು ಸಾಲಿಗ್ರಾಮ ರೂಪದಲ್ಲಿ ತುಳಸಿಯನ್ನು ವಿವಾಹವಾಗುವುದಾಗಿಯೂ ಹೇಳುತ್ತಾನೆ. ಇದೇ ಕಾರಣದಿಂದಾಗಿ ಅಂದಿನಿಂದ ಶುಕ್ಲಪಕ್ಷದ ದ್ವಾದಶಿಯ ದಿನ ತುಳಸಿ ವಿವಾಹವನ್ನು ಮಾಡಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿರಿ: ತುಳಸಿ ವಿವಾಹ: ಆಚರಣೆಯ ವಿಧಾನ, ಮಹತ್ವ ಮತ್ತು ಆರೋಗ್ಯ ಪ್ರಯೋಜನ

ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival

ತುಳಸಿ ವಿವಾಹ ಆಚರಣೆಯ ವಿಧಾನ

ಸಾಮಾನ್ಯವಾಗಿ ದೀಪಾವಳಿಯಲ್ಲಿ ಇರುವ ಸಂಭ್ರಮವೇ ತುಳಸಿ ವಿವಾಹದ ಸಮಯದಲ್ಲಿಯೂ ಇರುತ್ತದೆ. ತುಳಸಿ ವಿವಾಹಕ್ಕೆ ಮುನ್ನ ತುಳಸೀಕಟ್ಟೆಗಳನ್ನು ಶುಭ್ರಗೊಳಿಸಿ, ಅಲಂಕಾರಗಳನ್ನು ಮಾಡುತ್ತಾರೆ. ಮಾವಿನ ಎಳೆಯ ತೋರಣಗಳು ಮತ್ತು ಬಾಳೆಕಂಬಗಳನ್ನು ನೆಟ್ಟು ಮಂಟಪಗಳನ್ನೂ ಹಲವೆಡೆಗಳಲ್ಲಿ ಮಾಡುತ್ತಾರೆ. ಅಲ್ಲದೇ ಫಲಸಮೃದ್ಧವಾದ ನೆಲ್ಲಿಗಿಡಗಳನ್ನು ಇಟ್ಟು ಸಹ ಪೂಜಿಸಲಾಗುತ್ತದೆ.

ತುಳಸಿ ವಿವಾಹದ ಸಮಯದಲ್ಲಿ ಮದುವೆಯ ಮನೆಯಂತೆ ತುಳಸಿ ಕಟ್ಟೆಯ ಸುತ್ತ ಮಂಟಪಗಳನ್ನು ನಿರ್ಮಿಸಿ ಲಂಕಾರಗಳನ್ನು ಮಾಡುತ್ತಾರೆ. ಸ್ನಾನಾದಿಗಳನ್ನು ಮಾಡಿ, ಶುಭ್ರ ಬಟ್ಟೆಯನ್ನು ತೊಟ್ಟು ಪೂಜೆಯನ್ನು ನೆರವೇರಿಸಲಾಗುತ್ತದೆ. ಮಂಟಪದಲ್ಲಿ ವಿಷ್ಟುವಿನ ಚಿಕ್ಕ ಮೂರ್ತಿ ಅಥವಾ ಸಾಲಿಗ್ರಾಮವನ್ನು ಇಟ್ಟು ವಿವಾಹವನ್ನು ನೆರವೇರಿಸಲಾಗುತ್ತದೆ. ಅಲ್ಲದೇ ವಿಶೇಷವಾಗಿ ಹತ್ತಿಯಿಂದ ಮಾಡಿದ ಮಾಲೆಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಅಲ್ಲದೇ ತುಳಸಿ ಕಟ್ಟೆಯನ್ನು ಗೋವಿಂದ ನಾಮಸ್ಮರಣೆಯೊಂದಿಗೆ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ಜೊತೆಯಲ್ಲಿ ನೈವೇದ್ಯಕ್ಕೆ ಮಾಡಲಾದ ಪ್ರಸಾದಗಳನ್ನು ಹಂಚಿ ವಿಜೃಂಭಣೆಯಿಂದ ತುಳಸಿ ವಿವಾಹವನ್ನು ಆಚರಣೆ ಮಾಡಲಾಗುತ್ತದೆ.

ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival

ಇದನ್ನೂ ಓದಿರಿ: ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..!

ತುಳಸಿ ವಿವಾಹ ಪೂಜೆ ಮಾಡುವಾಗ ಪಠಿಸಬೇಕಾದ ಶ್ಲೋಕಗಳು

ಹಿಂದೂ ಧರ್ಮದ ಪ್ರಕಾರ ತುಳಸಿಯ ಪೂಜೆಯನ್ನು ಮಾಡುವುದು ಮಹತ್ ಪುಣ್ಯದ ಕೆಲಸ. ತುಳಸಿ ವಿವಾಹದ ಪೂಜೆಯನ್ನು ನೆರವೇರಿಸುವುದರಿಂದ ಕನ್ಯಾದಾನದ ಪುಣ್ಯವು ಸಿಗುತ್ತದೆ ಎಂದು ಹೇಳಲಾಗುತ್ತದೆ. ಪೂಜಿಸುವಾಗ ಶ್ಲೋಕಗಳನ್ನು ಪಠಿಸುವುದರಿಂದ ಮಹಾ ವಿಷ್ಟು ಸಂತೃಪ್ತಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಪದ್ಮಪುರಾಣದಲ್ಲಿ ಹೇಳಿರುವಂತೆ ದ್ವಾದಶಿ ರಾತ್ರಿ ತುಳಸಿ ಸ್ತೋತ್ರವನ್ನು ಪಠಿಸಬೇಕು. ಈ ದಿನ ಭಗವಾನ್ ವಿಷ್ಣು ಭಕ್ತರ ಎಲ್ಲಾ ಪಾಪಗಳಿಗೆ ಮೋಕ್ಷವನ್ನು ನೀಡುತ್ತಾನೆ. ಹಾಗಾದರೆ ತುಳಸಿಯ ಕುರಿತಾದ ಕೆಲವು ಶ್ಲೋಕಗಳನ್ನು ನೋಡೋಣ..

ಮಹಾಪ್ರಸಾದ ಜನನಿ,
ಸರ್ವ ಸೌಭಾಗ್ಯವರ್ಧಿನೀ ।
ಆಧಿ ವ್ಯಾಧಿಹರ ನಿತ್ಯಂ,
ತುಳಸಿ ತ್ವಂ ನಮೋಸ್ತುತೇ ।।

ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival

ದೇವೀ ತ್ವಂ ನಿರ್ಮಿತಾ ಪೂರ್ವಮರ್ಚಿತಾಸಿ ಮುನಿಶ್ವರೈಃ
ಮನೋ ನಮಸ್ತೇ ತುಳಸೀ ಪಾಪಂ ಹರ ಹರಿಪ್ರಿಯೇ ||

 

ಪ್ರಸೀದ ತುಲಸೀದೇವೀ ಪ್ರಸೀದ ಹರಿವಲ್ಲಭೇ
ಕ್ಷೀರೋದಮಥನೋದ್ಭೋತೇ ತುಲಸೀತ್ವಾಂ ನಮಾಮ್ಯಹಂ |
ಯಾದೃಷ್ಠಾ ನಿಖಿಲಾಘಸಂಗಶಮನೀ ಸ್ಪ್ರುಷ್ಟ್ಪಾವಪುಪಾವನೀ
ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ |
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: |

 

ವೃಂದಾ ವೃಂದಾವನೀ ವಿಶ್ವಪೂಜಿತಾ ವಿಶ್ವಪಾವನೀ |
ಪುಷ್ಪಸಾರಾ ನಂದನೀಯ ತುಳಸಿ ಕೃಷ್ಣ ಜೀವನೀ |
ಏತಭಾಮಾಂಷ್ಟಕ ಚೈವ ಸ್ತೋತಂ ನಾಮರ್ಥಂ ಸಂಯುತಂ|
ಯಃ ಪಠೇತ್‌ ತಾಂ ಚ ಸಂಪೂಜ್ಯ ಸೌಶ್ರಮೇಘ ಫಲಂಲಮೇತಾ||

ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival

ಓಂ ಶ್ರೀ ತುಳಸ್ಯೈ ವಿದ್ಮಹೇ|
ವಿಷ್ಣು ಪ್ರಿಯಾಯೈ ಧೀಮಹೀ |
ತನ್ನೋ ವೃಂದಾ ಪ್ರಚೋದಯಾತ್‌ ||

ತುಳಸಿ ವಿವಾಹ ದ ಸಮಯದಲ್ಲಿ ಆಪ್ತೇಷ್ಟರಿಗೆ ಹಂಚಿಕೊಳ್ಳಲು ಶುಭಾಶಯ ಸಂದೇಶಗಳು

ಭಾರತೀಯ ಸಂಸೃತಿಯಲ್ಲಿ ಹಲವಾರು ಹಬ್ಬಗಳು-ಹರಿದಿನಗಳು ಬರುತ್ತಲೇ ಇರುತ್ತದೆ. ಅಂತೆಯೇ ಅವುಗಳಲ್ಲಿ ಸಹೋದರತೆ ಮತ್ತು ಪ್ರೀತಿಯಿಂದ ಎಲ್ಲರೂ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಶುಭಾಶಯಗಳನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ. ಆಧುನಿಕ ಯುಗದಲ್ಲಿ ಹಬ್ಬಗಳಲ್ಲಿ ಮೊಬೈಲ್ ಮೂಲಕ ಶುಭಾಷಯ ಫೋಟೋಗಳು ಮತ್ತು ಮೆಸೇಜ್ ಗಳನ್ನು ಹಚ್ಚಿಕೊಳ್ಳುವ ಮೂಲಕ ಹಬ್ಬಗಳಿಗೆ ವಿಶೇಷವಾಗಿ ಶುಭಾಷಯ ಕೋರಲಾಗುತ್ತದೆ. ತುಳಸಿ ಹಬ್ಬಕ್ಕೆ ಶುಭಾಶಯಗಳನ್ನು ಹಂಚಿಕೊಳ್ಳಲು ಇಲ್ಲಿ ಕೆಲವು ಶುಭಾಷಯ ಪತ್ರಗಳು ಮತ್ತು ಮೆಸೇಜುಗಳನ್ನು ಹಂಚಿಕೊಳ್ಳಲಾಗಿದೆ.

  1. ತುಳಸಿ ದೇವಿ ಮತ್ತು ಮಹಾ ವಿಷ್ಟುವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಶೀರ್ವಾದವನ್ನು ಮಾಡಲಿ.
  2. ತುಳಸಿ ವಿವಾಹದ ಪವಿತ್ರ ದಿನ ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ. ತುಳಸಿ ವಿವಾಹದ ಶುಭಾಶಯಗಳು!ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival
  3. ತುಳಸಿ ಪೂಜೆ ದಿನದಂದು ಭಗವಾನ್‌ ವಿಷ್ಣು ಮತ್ತು ತುಳಸಿ ದೇವಿಗೆ ವಿವಾಹವಾಯಿತು ಎಂದು ನಂಬುತ್ತಾರೆ. ತುಳಸಿ ಮತ್ತು ಭಗವಾನ್‌ ವಿಷ್ಣುವಿನ ಅನುಗ್ರಹದಿಂದ ನಿಮ್ಮ ದಾಂಪತ್ಯ ಜೀವನವು ಸುಖಕರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ತುಳಸಿ ವಿವಾಹದ ಶುಭಾಶಯಗಳು.
  4. ಈ ದಿನ ತುಳಸಿಗೆ ವಿವಾಹ ಮಾಡುವುದರಿಂದ ಉತ್ತಮ ಜೀವನ ಸಂಗಾತಿ ಸಿಗಲಿ.. ನಿಮ್ಮ ಮನದಾಳದ ಅರಸಿ ನಿಮ್ಮ ಕೈಹಿಡಿದು ನಡೆಯುವಂತಾಗಲಿ.. ತುಳಸಿ ಪೂಜೆಯ ಶುಭಾಶಯಗಳು.
  5. ತಾಯಿಯ ಅನುಗ್ರಹದಿಂದ ನಿಮಗೆ ಹಾಗೂ ನಿಮ್ಮ ಪರಿವಾರದ ಮೇಲೆ ಸದಾ ಇರಲಿ. ತುಳಸಿ ವಿವಾಹದ ಶುಭಾಶಯಗಳು.
  6. ತುಳಸಿ ಮಾತೆ ಮತ್ತು ಶ್ರೀ ಕೃಷ್ಣ ಪರಮಾತ್ಮನು ನಿಮಗೆ ಈ ಜಗತ್ತಿನಲ್ಲಿ ಎಲ್ಲಾ ಸುಖ ಸಂತೋಷಗಳನ್ನು ನೀಡಲಿ. ನಿಮಗೆ ಸಂತೋಷದ ವೈವಾಹಿಕ ಜೀವನವನ್ನು ಆಶೀರ್ವದಿಸಲಿ. ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.
  7. ಲೋಕ ಪೂಜಿತೆ, ಮಹಾ ಪಾವನೀ, ಆರೋಗ್ಯ ಪ್ರಧಾಯಿನೀ, ಜಗದ್ವಂದಿತೆ ತುಳಸಿ ದೇವಿಯೇ, ಸ್ಮರಿಸಿ ನಮಿಸುವೆ ಈ ದಿನ. ಎಲ್ಲರಿಗೂ ತುಳಸಿ ವಿವಾಹದ ಶುಭಾಶಯಗಳು.    ತುಳಸಿ ವಿವಾಹ । tulsi-vivah-wishes-whatsapp-stickers-facebook-greetings-gif-images-sms-and-messages-to-send-on-the-festival
  8. ತುಳಸಿ ಮಾತೆಯ ಆಶೀರ್ವಾದದಿಂದ ನಿಮ್ಮೆಲ್ಲ ಕನಸುಗಳು ನೆರವೇರಲಿ. ಮುಂದಿನ ದಿನಗಳೆಲ್ಲ ನಿಮಗೆ ಶುಭದಿನಗಳೇ ತುಂಬಿರಲಿ. ತುಳಸಿ ವಿವಾಹದ ಶುಭಾಶಯಗಳು.
  9. ನೀವು ಸಲ್ಲಿಸಿದ ಪೂಜೆ ಸಿದ್ಧಿಯಾಗಲಿ. ನಿಮಗೂ ನಿಮ್ಮ ಕುಟುಂಬದವರಿಗೂ ತುಳಸಿ ವಿವಾಹದ ಶುಭಾಶಯಗಳು.
  10. ಸಮಸ್ತೆ ತುಳಸಿ ದೇವಿ ವಿಷ್ಣುಪ್ರಿಯೆ, ಶುಭೇ ಸಂಪತ್ಪ್ರದಾಯಿನಿ. ಎಲ್ಲರಿಗೂ ತುಳಸಿ ವಿವಾಹದ ಶುಭಾಶಯಗಳು.

ಇದನ್ನೂ ನೋಡಿರಿ: ಪುನೀತ್ ರಾಜಕುಮಾರ್ ಅವರ ಅಪರೂಪದ ಫೋಟೋಗಳು

LEAVE A REPLY

Please enter your comment!
Please enter your name here