ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಈ ಸುದ್ದಿ ಗಾಂಧಿ ನಗರದಲ್ಲಿ ಹರಡಿದ್ದು, ಡಿಸೇಂಬರ್ ಎರಡನೆಯ ವಾರದಲ್ಲಿ ಖ್ಯಾತ ಮಾಡೆಲ್ ಒಬ್ಬರ ಜೊತೆ ನಿಶ್ಚಿತಾರ್ಥ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಈ ಕುರಿತು ಮಾತನಾಡಿರುವ ಸುಮಲತಾ ಅಂಬರೀಷ್ ಅಂತದ್ದೇನೂ ಇಲ್ಲ ಎಂದು ಹೇಳಿದ್ದರು. ಅಭಿಷೇಕ್ ಮಾತನಾಡಿ ಹುಡುಗಿ ನೀವೇ ಹುಡುಕಿಕೊಡಿ ಎಂದು ತಮಾಷೆಯಾಗಿ ಕಾಲೆಳೆದಿದ್ದರು. ಆದರೆ ಅವರ ಆಪ್ತರೇ ಹೇಳಿರುವಂತೆ ಮಾತುಕತೆಗಳು ನಡೆದಿದ್ದು, ಮುಂದಿನ ವಾರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೆ ಸುಮಲತಾ ಅವರ ಸೊಸೆ ಯಾರೆಂದು ನಿಮಗೆಲ್ಲಾ ಕುತೂಹಲ ಉಂಟಾಗಿರಬಹುದು, ಹೇಳುತ್ತೇವೆ ಮುಂದೆ ನೋಡಿ.

ಅಭಿಷೇಕ್ ಅಂಬರೀಷ್ ಮದುವೆಯಾಗಲಿರುವ ಹುಡುಗಿ ಅವರ ಬಹುಕಾಲದ ಗೆಳತಿ, ಅವಿವಾ ಬಿದ್ದಪ್ಪ. ಇವರು ಸಿನಿಮಾ ಲೋಕದ ಹುಡುಗಿಯಲ್ಲದಿದ್ದರೂ ಪ್ರಸಿದ್ಧ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲದೇ ಇವರದೇ ಹೆಸರಿನ ಅವೀವಾ ಬ್ರಾಂಡ್ ನ ಒಡತಿಯೂ ಆಗಿದ್ದಾರೆ.

ಅವೀವಾ ಹಾಗೂ ಅಭಿಷೇಕ್ ಅಂಬರೀಷ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಅವಿವಾ ಮತ್ತು ಅಂಬರೀಷ್ ಸ್ನೇಹಿತರು ಎನ್ನುವುದಂತೂ ಸತ್ಯ.
ಇದನ್ನೂ ಓದಿರಿ: ಸಮುದ್ರ ತಟದಲ್ಲಿ ಮಜಾ ಮಾಡಿದ ಆಯ್ರಾ, ಯಥರ್ವ್: ಫೋಟೋ ಹಂಚಿಕೊಂಡ ರಾಧಿಕಾ

ಅಂಬರೀಷ್ ಮತ್ತು ಸುಮಲತಾ ಅವರ ವಿವಾಹ ವಾರ್ಷಿಕೋತ್ಸವದ ದಿನದಂದು ನಿಶ್ಚಿತಾರ್ಥದ ದಿನ ಮತ್ತು ತಾವು ಮದುವೆಯಾಗಲಿರುವ ಹುಡುಗಿಯನ್ನು ಪರಿಚಯಿಸುವ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

ಆದರೆ ಇದೀಗ ಇವರ ಎಂಗೇಜ್ಮೆಂಟ್ ವಿಷಯ ಲೀಕ್ ಆಗಿದ್ದು, ಡಿಸೇಂಬರ್ 11 ರಂದು ಅದ್ದೂರಿ ಕಾರ್ಯಕ್ರಮದಲ್ಲಿ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಭಿ ಮತ್ತು ಅವಿವಾ ಸ್ನೇಹಿತರಾಗಿದ್ದು, ಸ್ನೇಹವೇ ಪ್ರೀತಿಯಾಗಿ ಬದಲಾಗಿದೆ. ಈ ಕುರಿತು ಅಭಿಷೇಕ್ ತಾಯಿಗೆ ಕೆಲ ತಿಂಗಳ ಹಿಂದೆಯಷ್ಟೇ ತಿಳಿಸಿ, ಒಪ್ಪಿಗೆ ಪಡೆದುಕೊಂಡು ಮುಂದುವರೆದಿದ್ದಾರೆ ಎನ್ನಲಾಗಿದೆ.

ಅವಿವಾ ಪ್ಯಾಷನ್ ಲೋಕದಲ್ಲಿ ಸಕತ್ ಡಿಮ್ಯಾಂಡ್ ಇರುವ ಹುಡುಗಿಯಾಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ 44 ಸಾವಿರಕ್ಕಿಂತಲೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ.
ಇದನ್ನೂ ಓದಿರಿ: Abhishek Ambareesh Engagement: ಶುಭಕೋರಿದ ಯಶ್ ಮತ್ತು ದರ್ಶನ

ಈ ವಿವಾಹದ ಕುರಿತಂತೆ ಪ್ರಸಾದ್ ಬಿದ್ದಪ್ಪ ಮತ್ತು ಅಂಭಿ ಕುಟುಂಬ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇನ್ನೇನು ಈ ಕುರಿತಂತೆ ಅಧಿಕೃತ ಹೇಳಿಕೆ ಹೊರಬೀಳುವ ನಿರೀಕ್ಷೆಯಿದೆ.

ಇದನ್ನೂ ನೋಡಿರಿ: ‘ಕಾಂತಾರ’ ಚಿತ್ರದ ನಟಿ ಸಪ್ತಮಿ ಗೌಡ ಅವರ ಸುಂದರ ಫೋಟೋಗಳು
ಅಭಿಷೇಕ್ ಅಂಬರೀಷ್ ಇದೀಗ ಕಾಳಿ ಚಿತ್ರದಲ್ಲಿ ಸಪ್ತಮಿ ಗೌಡ ಅವರ ಜೊತೆಯಲ್ಲಿ ಸಿನಿಮಾ ಮಾಡಲಿದ್ದು, ಮೊನ್ನೆಯಷ್ಟೇ ಸಿನಿಮಾ ಮುಹೂರ್ತ ನೆರವೇರಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿನಯಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿಸಿದ್ದಾರೆ. ಎಲ್ಲ ಕೆಲಸಗನ್ನು ಮುಗಿಸಿಕೊಂಡು ಸದ್ಯ ಅಭಿಷೇಕ್ ಎಂಗೇಜ್ಮೆಂಟ್ ಗೆ ಸಿದ್ಧರಾಗಿದ್ದಾರೆ.