‘ಕಾಂತಾರ’ ಚಿತ್ರದದ ಮೂಲಕ ಪ್ರಸಿದ್ಧಿಗೆ ಬಂದಿರುವ ಸಪ್ತಮಿ ಗೌಡ ಅವರ ಕೆಲವು ಮಾಹಿತಿಗಳೊಂದಿಗೆ ಫೋಟೋಗಳನ್ನು ನೋಡೋಣ…ಇವರು 2020 ರಲ್ಲಿ ತೆರೆಕಂಡ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಎರಡನೆಯ ಚಿತ್ರ ‘ಕಾಂತಾರ’ ಮೂಲಕ ದೊಡ್ಡ ಯಶಸ್ಸು ಪಡೆದಿದ್ದಾರೆ. ಈ ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಪಾತ್ರ ಮಾಡಿದ್ದು, ಇವರ ನಟನೆಯನ್ನು ಚಿತ್ರಪ್ರೇಮಿಗಳು ಮೆಚ್ಚಿದ್ದಾರೆ.
‘ಕಾಂತಾರ’ ಸಕ್ಸಸ್ ನಂತರ ಇತ್ತೀಚಿಗೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಫೋಟೋ ಶೇರ್ ಮಾಡಿದ್ದಾರೆ.
‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಸಪ್ತಮಿ ಗೌಡ ಅವರ ಡಿಮ್ಯಾಂಡ್ ಸಹ ಹೆಚ್ಚಾಗಿದೆ. ಅವರ ಮುಂದಿನ ಚಿತ್ರ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ.
ಇತ್ತೀಚಿಗೆ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಸೆರೆಹಿಡಿಯಲಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇವರ ಅಭಿನಯ ಕರುನಾಡಿನ ಜನತೆಗೆ ಮೆಚ್ಚುಗೆಯಾಗಿದ್ದು, ಒಂದಾದ ನಂತರ ಒಂದು ಬಗೆ ಬಗೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅತ್ಯುತ್ತಮ ನಟನೆಯ ಮೂಲಕ ಯಶಸ್ಸನ್ನು ಗಳಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

[…] […]