ಶೀತವು ಒಂದು ಸಾಂಕ್ರಾಮಿಕವಾಗಿ ಹರಡುವ ಕಾಯಿಲೆಯಾಗಿದೆ. ನಮ್ಮ ಸುತ್ತಲಿರುವ ಯಾರಾದರೂ ವೈರಸ್ ಸೋಂಕಿಗೆ ಒಳಗಾಗಿದ್ದರೆ ಅದರಿಂದ ನಮಗೂ ಸಹ ಬರಬಹುದು.
Image Source-HealthShots
ಯೋಗಾಸನವನ್ನು ಪ್ರತಿದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬಿಳಿರಕ್ತಕಣಗಳು ದೇಹದಲ್ಲಿ ಹೆಚ್ಚಾಗಿ, ರೋಗಕಾರಕಗಳ ವಿರುದ್ಧ ಸುಲಭವಾಗಿ ಹೋರಾಡಲು ಸಾಧ್ಯಾವಾಗುತ್ತದೆ.
Image Source-HealthShots
ಉತ್ತಾನಾಸನ ಪ್ರಮುಖವಾಗಿ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ಸೈನಸ್ ನ ಹಾದಿಯನ್ನು ತೆರವುಗೊಳಿಸಿ ಉತ್ತಮ ಉಸಿರಾಟ ಕ್ರಿಯೆಗೆ ಸಹಾಯ ಮಾಡುತ್ತದೆ.
ಅಧೋಮುಖ ಶ್ವಾನಾಸನವನ್ನು ಮಾಡಿದಾಗ ಗುರುತ್ವಾಕರ್ಷಣೆಯ ಹಿಮ್ಮುಖ ಎಳೆತ ಉಂಟಾಗುತ್ತದೆ. ಇದರಿಂದಾಗಿ ದುಗ್ಧರಸ ಮತ್ತು ರಕ್ತದ ಸರಿಯಾದ ಪರಿಚಲನೆ ಉಂಟಾಗುತ್ತದೆ.
ವಿಪರೀತ ಕರಣಿ ಇದು ಗೋಡೆಗಳ ಸಹಾಯವನ್ನು ಪಡೆದು, ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿ ಮಾಡಬಹುದಾದ ಭಂಗಿಯಾಗಿದೆ. ಇದರಿಂದ ತಲೆನೋವು, ಬೆನ್ನು ನೋವು ಮತ್ತು ಸೊಂಟದ ನೋವುಗಳು ನಿವಾರಣೆಯಾಗುತ್ತದೆ.
ಶೀತ, ಕಫ ನಿವಾರಣೆಗೆ ಯೋಗಾಸನದ ಪರಿಹಾರಕ್ಕಾಗಿ ಹೆಚ್ಚಿನ ಮತ್ತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಮೇಲಕ್ಕೆ SWIPE ಮಾಡಿ.