ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಎಂಗೇಜ್ ಮೆಂಟ್ ಅದ್ದೂರಿಯಾಗಿ ನಡೆದಿದೆ.
ಬೆಂಗಳೂರಿನ ಫೋರ್ ಸೀಸನ್ಸ್ ಎಂಬ ಹೊಟೇಲ್‌ನಲ್ಲಿ ಡಿಸೆಂಬರ್ 11 ರಂದು ಅದ್ದೂರಿಯಾಗಿ ನಿಶ
್ಚಿತಾರ್ಥ ಕಾರ್ಯಕ್ರಮ ನಡೆಯಿತು.
ಇಂದಿನ ಅದ್ದೂರಿ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಸಹ ಭಾಗಿಯಾಗಿದ್ದರು.
ರಾಜಕೀಯ ನಾಯಕರಾದ ಅಶ್ವತ್ ನಾರಾಯಣ್, ಆರ್ ಅಶೋಕ್, ಸುಧಾಕರ್ ಭಾಗಿಯಾಗಿ ಶುಭ ಕೋರಿದರು.
ಅಂಭಿ ಪುತ್ರನ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಭಾಗಿಯಾಗಿ ಶುಭಾಶಯ ಕೋರಿದರು.
ಅವಿವಾ ಸಿನಿಮಾ ಲೋಕದ ಹುಡುಗಿಯಲ್ಲದಿದ್ದರೂ ಪ್ರಸಿದ್ಧ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಮೊದಲಿಗೆ ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥದ ಕುರಿತಾಗಿ ಗೌಪ್ಯತೆಯನ್ನು ಕಾಯ್ದುಕೊಂಡಿದ್ದರು. ನಂತರ ಮಾಧ್ಯಮಗಳಿಗೆ ವಿಷಯ ಸೋರಿಕೆಯಾಗಿತ್ತು.