ಹಸಿರೆಲೆ ತರಕಾರಿಗಳು: ಪಾಲಕ್, ಮೆಂತ್ಯ, ಬಸಳೆ ಎಲೆಗಳಂತಹ ಹಸಿರೆಲೆ ತರಕಾರಿಗಳು ನಿಮ್ಮ ತೂಕ ಇಳಿಸಿಕೊಳ್ಳಲು ಅತ್ಯುತ್ತಮವಾದ ಆಹಾರಗಳಾಗಿವೆ.
ಮೂಲಂಗಿ : ಇದು ಉತ್ತಮ ಫೈಬರ್ ಹೊಂದಿದ್ದು, ತೂಕ ಇಳಿಕೆಗೆ ಸಹಾಯಕವಾಗಿದೆ. ಫೈಬರ್ ಹೆಚ್ಚಿದ್ದರೆ ಉತ್ತಮವಾಗಿ ಜೀರ್ಣವಾಗುತ್ತವೆ ಮತ್ತು ಕೊಬ್ಬು ಶೇಖರಣೆಯಾಗುವುದಿಲ್ಲ.
ಬೀಟ್ರೂಟ್: ಇದು ತೂಕ ನಷ್ಟಕ್ಕೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 100 ಗ್ರಾಂ ಸೇವನೆಯಿಂದ, 43 ಗ್ರಾಂ ಕೆಲೋರಿಗಳು, 0.2 ಗ್ರಾಂ ಕೊಬ್ಬು ಮತ್ತು 10 ಗ್ರಾಂ ಕಾರ್ಬೋಹೈಡ್ರೇಟ್ ದೊರೆಯುತ್ತದೆ.
ಪೇರಲಹಣ್ಣು: ತೂಕ ನಷ್ಟಕ್ಕೆ ಇದು ಉತ್ತಮವಾಗಿದೆ. ಇದು ನಮ್ಮ ದೈನಂದಿನ ಶಿಫಾರಸು ಮಾಡಲಾದ ಫೈಬರ್‌ನ 12% ಅನ್ನು ಪೂರೈಸುತ್ತದೆ.